Uncategorised

ನಾನು ಮಾಡಿದ 15 ನಿಮಿಷದ ಭಾಷಣ ಕೇಳಿ ಆರ್ ಎಸ್ ಎಸ್ ಈಗಲೂ ಭಯಪಡುತ್ತದೆ, ನಾವು ಮುಸ್ಲಿಂರು ಯಾರಿಗೂ ಭಯಪಡುವುದಿಲ್ಲ

ಅಸಾವುದ್ದೀನ್ ಓವೈಸಿ ಸಹೋದರ ಹಾಗೂ  AIMIM ಪಕ್ಷದ ಶಾಸಕ ಅಕ್ಬರುದ್ದೀನ್ ಓವೈಸಿ ಮತ್ತೊಮ್ಮೆ ಕೋಮುದ್ವೇಷ ಸೃಷ್ಟಿ ಮಾಡುವ ಹೇಳಿಕೆ ನೀಡಿದ್ದಾನೆ.

” ಆರ್ ಎಸ್ ಎಸ್ ನಾನು ಹಿಂದೆ ನೀಡಿದ ಹೇಳಿಕೆ ಕೇಳಿ ಇಂದಿಗೂ ಭಯಪಡುತ್ತದೆ,ಮುಸ್ಲಿಂರು ಯಾರಿಗೂ ಭಯಪಡುವುದಿಲ್ಲ,ಮುಂದಿನ ದಿನಗಳಲ್ಲಿ ಬಜರಂಗದಳ ,ಆರ್ ಎಸ್ ಎಸ್ ಮತ್ತು ಬಿಜೆಪಿಗೆ ಪಾಠ ಕಲಿಸುತ್ತೇವೆ” ಎಂದು ಅಕ್ಬರುದ್ದೀನ್ ಓವೈಸಿ ಚುನಾವಣೆ ಪ್ರಚಾರ ಸಂದರ್ಭದಲ್ಲಿ ಹೇಳಿದ್ದಾನೆ.

“15 ನಿಮಿಷ ಈ ನಪುಂಸಕ ಪೋಲೀಸ್ ರು ಪಕ್ಕಕ್ಕೆ ಸರಿದರೆ ನಾವು 25 ಕೋಟಿ ಮುಸ್ಲಿಂರು  100 ಕೋಟಿ ಹಿಂದೂ ಗಳನ್ನು ಹತ್ಯೆ ಮಾಡುತ್ತೇವೆ “ಎಂಬ ವಿವಾದಾತ್ಮಕ ಹೇಳಿಕೆಯನ್ನು ಅಕ್ಬರುದ್ದೀನ್ ಓವೈಸಿ ಈ ಹಿಂದೆ ನೀಡಿದ್ದ, ಈಗ ಇದೇ ರೀತಿಯ  ಹೇಳಿಕೆಯನ್ನು ಓವೈಸಿ ನೀಡಿದ್ದಾನೆ .

ಪುರಸಭೆ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದ ಓವೈಸಿ “ಬಜರಂಗದಳ ,ಆರ್ ಎಸ್ ಎಸ್ ಮತ್ತು  ಗೋ ರಕ್ಷಕರಿಗೆ  ಮುಸ್ಲಿಂರು ಭಯ ಪಡುವುದಿಲ್ಲ, ನಾನು ಈ ಹಿಂದೆ ಮಾಡಿದ 15 ನಿಮಿಷಗಳ ಭಾಷಣ ಕೇಳಿ ಆರ್ ಎಸ್ ಎಸ್ ಇಂದಿಗೂ ಭಯಪಡುತ್ತದೆ ,ಮೋದಿ ಚೌಕಿದಾರ್ ಎಂದು ಹೇಳಿಕೊಳ್ಳುತ್ತಿದ್ದಾರೆ ,ಈ ದೇಶಕ್ಕೆ ಚೌಕಿದಾರ್ ಅಥವಾ ಪಕೋಡವಾಲಗಳು ಬೇಕಾಗಿಲ್ಲ, ಈ ದೇಶಕ್ಕೆ ಪ್ರಧಾನ ಮಂತ್ರಿಗಳು  ಬೇಕು ,ಚೌಕಿದಾರ್ ಆಗಲೂ ಮೋದಿ ಬಯಸಿದ್ದರೆ ನನ್ನ ಬಳಿ ಬರಲಿ” ಎಂದು ಹೇಳಿದ್ದಾನೆ.

Loading...
Click to comment

Leave a Reply

Your email address will not be published. Required fields are marked *

Most Popular

To Top