Uncategorised

ಜನರ ಪರ ಕೆಲಸ ಮಾಡಲು ಸಿಎಂ ಕೇಜ್ರಿವಾಲ್ ನನಗೆ ಬಿಡುತ್ತಿಲ್ಲ-ಅಲ್ಕಾ ಲಾಂಬಾ

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿರುದ್ಧ ಸ್ವತಃ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಮತ್ತು ಶಾಸಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಈಗ ದೆಹಲಿ ಚಾಂದನಿ ಚೌಕ್ ಶಾಸಕಿ ಅಲ್ಕಾ ಲಾಂಬಾ ಕೇಜ್ರಿವಾಲ್ ನನಗೆ ಜನಪರ ಕೆಲಸ ಮಾಡಲು ಬಿಡುತ್ತಿಲ್ಲ ಎಂದು ಆರೋಪ ಮಾಡಿದ್ದಾರೆ.

ದೆಹಲಿ ಜನರನ್ನು ಮೂರ್ಖರನ್ನಾಗಿ ಮಾಡಿ, ಮುಖ್ಯಮಂತ್ರಿ ಆಗಿರುವ ಕೇಜ್ರಿವಾಲ್ ಯಾವುದೇ ಕಾರ್ಯ ಮಾಡದೆ, ನರೇಂದ್ರ ಮೋದಿ ಮತ್ತು ಬಿಜೆಪಿಗರು ಜನರ ಪರ ಕೆಲಸ ಮಾಡಲು ನನಗೆ ಬಿಡುತ್ತಿಲ್ಲ ಎಂದು ಹಲವು ಸಲ ಆರೋಪ ಮಾಡಿದ್ದಾರೆ, ಆದರೆ ಅದೇ ರೀತಿಯ ಆರೋಪವನ್ನು ಕೇಜ್ರಿವಾಲ್ ವಿರುದ್ಧ ಆಮ್ ಆದ್ಮಿ ಪಕ್ಷದ ಶಾಸಕಿ ಅಲ್ಕಾ ಲಾಂಬಾ ಈಗ ಮಾಡಿದ್ದಾರೆ.ಅವರು ಈ ಹಿಂದೆ ಹಲವು ಸಲ ಪಕ್ಷದ ವಿರುದ್ಧ ಮತ್ತು ಕೇಜ್ರಿವಾಲ್ ವಿರುದ್ಧ ಹೇಳಿಕೆ ನೀಡಿದ್ದಾರೆ.

“ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ನನ್ನ ವಿರುದ್ಧ ಕೆಲಸ ಮಾಡುತ್ತಿದ್ದಾರೆ. ಈ ಪ್ರದೇಶದಲ್ಲಿ ನಾನು ಪ್ರಾರಂಭಿಸಿದ ಸಿಸಿಟಿವಿ ಸ್ಥಾಪನಾ ಕಾರ್ಯಕ್ಕೆ ಅಡ್ಡಿಯುಂಟುಮಾಡುವ ಮೂಲಕ ಆಮ್ ಆದ್ಮಿ ಪಕ್ಷ ರಾಜಕೀಯ ದುರುದ್ದೇಶ ಹೊಂದಿದೆ ಎಂಬುದು ತಿಳಿಯುತ್ತದೆ , ಇದು ಚಾಂದನಿ ಚೌಕ್ ವಿಧಾನಸಭಾ ಕ್ಷೇತ್ರದ ಜನರ ಜೀವನದ ಮೇಲೆ ಪರಿಣಾಮ ಬೀರುತ್ತದೆ ”ಎಂದು ಅಲ್ಕಾ ಲಾಂಬಾ ಹೇಳಿದ್ದಾರೆ.

Loading...
Click to comment

Leave a Reply

Your email address will not be published. Required fields are marked *

Most Popular

To Top