Uncategorised

ಮೋದಿಜೀ ಸಮಯಕ್ಕೆ ಸರಿಯಾಗಿ ಮನೆಗೆ ಹೋಗಿದ್ದರೆ, ಇಂದು ಅವರು ಬೇರೆಯವರ ಮಗುವಿನೊಂದಿಗೆ ಆಟವಾಡುವ ಪರಿಸ್ಥಿತಿ ಬರುತ್ತಿರಲಿಲ್ಲ-ಕಾಂಗ್ರೆಸ್ ನಾಯಕಿ

ನರೇಂದ್ರ ಮೋದಿ ಅವರು ಸಣ್ಣ ಮಗುವಿನ ಜೊತೆಗಿನ ಫೋಟೋ ವನ್ನು ಹಂಚಿಕೊಂಡಿದ್ದಾರೆ,ಇದರ ಬಳಿಕ ಕಾಂಗ್ರೆಸ್ಸ್ ನಾಯಕರು ಮತ್ತು ಅರ್ಬನ್ ನಕ್ಸಲರು ತಮ್ಮ ವಿಕೃತ ಮನಸ್ಸನ್ನು ಮತ್ತೊಮ್ಮೆ ಹೊರಹಾಕಿದ್ದಾರೆ.

ರಾಜಸ್ಥಾನ್ ಮಹಿಳಾ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ರೀನಾ ಮಿಮ್ರೊಥ ಅವರು ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ವೈಯಕ್ತಿಕ ದಾಳಿ ಮಾಡಿದ್ದಾರೆ. ಟ್ವಿಟ್ಟರ್ ನಲ್ಲಿ ಮೋದಿ ಅವರು ಮಗುವಿನ ಜೊತೆಗಿರುವ ಫೋಟೊ ಹಂಚಿಕೊಂಡು “ಮೋದಿಜಿ ಸಮಯಕ್ಕೆ ಸರಿಯಾಗಿ ಮನೆಗೆ ಹೋಗಿದ್ದರೆ ಇಂದು ಬೇರೆಯವರ ಮಗುವಿನ ಜೊತೆ ಆಟ ಆಡುವ ಪರಿಸ್ಥಿತಿ ಬರುತ್ತಿರಲಿಲ್ಲ” ಎಂದು ತಮ್ಮ ವಿಕೃತ ಮನಸ್ಥಿತಿಯನ್ನು ಹೊರಹಾಕಿದ್ದಾರೆ.

ಪಿಎಂ ಮೋದಿ ಅವರು ಮಂಗಳವಾರ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಮತ್ತು ಟ್ವಿಟ್ಟರ್ ನಲ್ಲಿ ಮಗುವಿನೊಂದಿಗೆ ಆಡುತ್ತಿರುವ ಕೆಲವು ಚಿತ್ರಗಳನ್ನು ಪೋಸ್ಟ್ ಮಾಡಿದ್ದರು, ಇದರ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಮೆಚ್ಚುಗೆ ವ್ಯಕ್ತವಾಗಿತ್ತು, ಮೋದಿ ಜೊತೆ ಇರುವ ಮಗು ಯಾರು ಎಂಬ ಚರ್ಚೆ ದೊಡ್ಡ ಮಟ್ಟದಲ್ಲಿ ನಡೆದಿತ್ತು.

ಬಳಿಕ ಪ್ರಧಾನ ಮಂತ್ರಿಯೊಂದಿಗೆ ಆಟವಾಡುತ್ತಿದ್ದ ಪುಟ್ಟ ಮಗು ಬಿಜೆಪಿ ಸಂಸದ ಸತ್ಯನಾರಾಯಣ್ ಜತಿಯ ಅವರ ಮೊಮ್ಮಗ ಎಂದು ನಂತರ ತಿಳಿದು ಬಂದಿತ್ತು . ಮೋದಿ ಮಕ್ಕಳೊಂದಿಗೆ ಇರುವ ಫೋಟೋಗಳನ್ನು ಇದೆ ಮೊದಲ ಬಾರಿಗೆ ಹಂಚಿಕೊಂಡಿಲ್ಲ .ನನ್ನನ್ನು ಭೇಟಿ ಮಾಡಲು ಬಂದ “ವಿಶೇಷ ಸ್ನೇಹಿತ” ಎಂದು ಉಲ್ಲೇಖಿಸಿ ಮೋದಿ ಮಗುವಿನ ಜೊತೆಗಿನ ಫೋಟೋ ಹಂಚಿಕೊಂಡ ಬಳಿಕ,ಈ ಬಾರಿ ದೊಡ್ಡ ಪ್ರಮಾಣದ ಚರ್ಚೆ ಮತ್ತು ಕುತೂಹಲಕ್ಕೆ ಕಾರಣವಾಗಿತ್ತು.

Loading...
Click to comment

Leave a Reply

Your email address will not be published. Required fields are marked *

Most Popular

To Top