Uncategorised

ರಾಮ ಎಲ್ಲರಿಗೂ ಸೇರಬೇಕು ಎಂದ ಮುಸ್ಲಿಂ ಶಾಸಕನಿಗೆ ಜೈ ಶ್ರೀ ರಾಮ ಹೇಳಲು ಒತ್ತಾಯಿಸಿದ ಬಿಜೆಪಿ ಶಾಸಕ

ಇತ್ತೀಚೆಗೆ ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಹಲವು ಬುದ್ಧಿ ಜೀವಿಗಳಿಗೆ ಮತ್ತು ಮುಸ್ಲಿಂ ರಾಜಕಾರಣಿಗಳಿಗೆ ದೊಡ್ಡ ಹಿನ್ನಡೆಯಾಗಿದೆ.

ಹಿಂದೂ ಗಳು ಜಾಗೃತರಾಗಿರುವ ಕಾರಣ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನಾಯಕರು ದೇವಾಲಯಗಳಿಗೆ ಬರುತ್ತಿದ್ದಾರೆ.ಶ್ರೀ ರಾಮನ ಬಗ್ಗೆ ತಮ್ಮ ಪ್ರೀತಿಯನ್ನು ಹಲವು ಹಿಂದೂ ವಿರೋಧಿ ಗಳು ವ್ಯಕ್ತಪಡಿಸುತ್ತಿದ್ದಾರೆ.ಈಗ ಕಾಂಗ್ರೆಸ್ ಮುಸ್ಲಿಂ ಶಾಸಕ ರಾಮ ಎಲ್ಲರಿಗೂ ಸೇರ ಬೇಕು,ರಾಮನ ಹೆಸರಿನಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಹೇಳಿದ ,ಬಳಿಕ ಜೈ ಶ್ರೀ ರಾಮ ಘೋಷಣೆ ಕೂಗುವಂತೆ ಆ ಕಾಂಗ್ರೆಸ್ ಶಾಸಕನಿಗೆ ಬಿಜೆಪಿ ಶಾಸಕ ಒತ್ತಾಯಿಸಿದ್ದಾರೆ.

“ರಾಮ ಎಲ್ಲರಿಗೂ ಸೇರಬೇಕು,ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ರಾಮನ ಹೆಸರಿನಲ್ಲಿ ಸೃಷ್ಟಿಸಿದ ಗಲಭೆಯನ್ನು ಇಲ್ಲಿ ಸೃಷ್ಟಿಸಲು ಸಾಧ್ಯವಿಲ್ಲ ,ಈ ಬಾರಿ ಕಾಂಗ್ರೆಸ್ಸ್ ಜಾರ್ಖಂಡ್ ನಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಕಾಂಗ್ರೆಸ್ ಶಾಸಕ ಇರ್ಪಾನ್ ಅನ್ಸಾರಿ ಮಾಧ್ಯಮಕ್ಕೆ ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಪಕ್ಕದಲ್ಲೇ ಇದ್ದ ಬಿಜೆಪಿ ಸಚಿವ ಸಿ ಪಿ ಸಿಂಗ್ ಹೌದು ಶ್ರೀ ರಾಮ ಎಲ್ಲರಿಗೂ ಸೇರಬೇಕು, ನನ್ನ ಸಹೋದರ ಇರ್ಷಾನ್ ಈಗ ಜೈ ಶ್ರೀ ರಾಮ ಘೋಷಣೆ ಕೂಗಲಿ ಎಂದು ಒತ್ತಾಯಿಸಿದ್ದಾರೆ,ಆದರೆ ಕಾಂಗ್ರೆಸ್ ಶಾಸಕ ನಿರಾಕರಿಸಿದ ಬಳಿಕ ನಿಮ್ಮ ಪೂರ್ವಜರು ಕೂಡ ಶ್ರೀ ರಾಮನ ಆರಾಧಕರು , ಬಾಬರ್ ,ಘೋರಿ,ಗಜನಿ ಮತ್ತು ತೈಮೂರನ ವಂಶಸ್ಥರಲ್ಲ ನೀವು,ಶ್ರೀ ರಾಮನೆ ನಿಮ್ಮ ಪೂರ್ವಜ ಎಂದು ಹೇಳಿದ್ದಾರೆ.ಆಗ ಇರ್ಪಾನ್ ಅನ್ಸಾರಿ ಅಭಿವೃದ್ಧಿ ಮಾಡಿ ಮತ್ತು ಜನರಿಗೆ ಉದ್ಯೋಗ ನೀಡಿ ಎಂದು ತಮ್ಮ ಮಾತನ್ನು ಬದಲಾಯಿಸಿದ್ದಾರೆ.

Loading...
Click to comment

Leave a Reply

Your email address will not be published. Required fields are marked *

Most Popular

To Top