Uncategorised

ಬಿಜೆಪಿ ಗೆದ್ದ ಯುದ್ಧ ಎಂದು ಕಾರ್ಗಿಲ್ ವಿಜಯ ದಿವಸ ಆಚರಣೆ ಮಾಡಲಿಲ್ಲ ಕಾಂಗ್ರೆಸ್

ಪಾಕಿಸ್ತಾನ ಸೇನೆಯು ಅಕ್ರಮವಾಗಿ ಆಕ್ರಮಿಸಿಕೊಂಡಿದ್ದ ಭಾರತದ ಕಾರ್ಗಿಲ್ ಪ್ರದೇಶವನ್ನು ಪುನಃ ವಶಪಡಿಸಿಕೊಂಡು ಭಾರತೀಯ ಸೇನೆ ವಿಜಯ ಸಾಧಿಸಿತ್ತು. 1999 ರ ಜುಲೈ 26 ರಂದು ಭಾರತೀಯ ಸೇನೆ ಕಾರ್ಗಿಲ್ ನಲ್ಲಿ ವಿಜಯ ಪತಾಕೆ ಹಾರಿಸಿತು. ಇದು ಭಾರತದ ಪಾಲಿಗೆ ದೊಡ್ಡ ವಿಜಯವೆಂದು ಪರಿಗಣಿಸಲ್ಪಟ್ಟಿದೆ ಮತ್ತು ಅಂದಿನಿಂದ ಜುಲೈ 26 ರಂದು ವಾರ್ಷಿಕವಾಗಿ ಕಾರ್ಗಿಲ್ ವಿಜಯ್ ದಿವಾಸ್ ಆಚರಿಸಲಾಗುತ್ತದೆ.

ಹಿಂದಿನ ಯುಪಿಎ ಸರ್ಕಾರವು ಕಾರ್ಗಿಲ್ ವಿಜಯ ದಿನದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರಲಿಲ್ಲ ಮತ್ತು ಸರ್ಕಾರವು ಇದನ್ನು 2004-2009ರಿಂದ ಅಧಿಕೃತವಾಗಿ ಆಚರಿಸಲಿಲ್ಲ ಎಂದು ರಾಜ್ಯಸಭಾ ಸಂಸದ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.

ಯುಪಿಎ -1 ಅಧಿಕಾರಾವಧಿಯಲ್ಲಿ 2009 ಕಾಂಗ್ರೆಸ್ ಪಕ್ಷದ ಸಂಸದ ರಶೀದ್ ಅಲ್ವಿ ಅವರು ಕಾರ್ಗಿಲ್ ವಿಜಯ ದಿನವನ್ನು ಆಚರಿಸುವುದನ್ನು ನಿಲ್ಲಿಸಿದಕ್ಕೆ ಸ್ಪಷ್ಟವಾದ ಕಾರಣವನ್ನು ನೀಡಲಿಲ್ಲ . ನಮ್ಮ ಸ್ವಂತ ಭೂಪ್ರದೇಶದಲ್ಲಿ ಯುದ್ಧ ನಡೆದಿದ್ದರಿಂದ ಕಾರ್ಗಿಲ್ ವಿಜಯ ಆಚರಣೆ ಮಾಡುವಂತಹ ದೊಡ್ಡ ಯುದ್ಧವಾಗಿರಲಿಲ್ಲ ,ಆದರೂ ಬಿಜೆಪಿ ಮತ್ತು ಎನ್‌ಡಿಎ ಆಚರಿಸಿಕೊಂಡು ಬಂದಿತ್ತು ಎಂದು ಅಲ್ವಿ ಹೇಳಿದ್ದರು.

ರಾಜ್ಯ ಸಭಾ ಬಿಜೆಪಿ ಸಂಸದ ರಾಜೀವ್ ಚಂದ್ರಶೇಖರ್ ಅವರ ಪ್ರಯತ್ನದ ಕಾರಣ ಕಾಂಗ್ರೆಸ್ ಸರ್ಕಾರವು ಪುನಃ ಕಾರ್ಗಿಲ್ ವಿಜಯ ದಿವಸ ಆಚರಣೆ ಪ್ರಾರಂಭ ಮಾಡಿತು. ಜುಲೈ 21, 2009 ರಂದು, ಕಾರ್ಗಿಲ್ ವಿಜಯ್ ದಿವಸ ಬಗ್ಗೆ ರಾಜ್ಯಸಭೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದರು. ಮತ್ತು ಜುಲೈ 23 ರಂದು ರಾಜ್ಯ ಸಭೆಯಲ್ಲಿ ಸಾರ್ವಜನಿಕ ಪ್ರಾಮುಖ್ಯತೆಯ ವಿಷಯವಾಗಿ ಪ್ರಸ್ತಾಪಿಸಿದ್ದರು.

2010 ರಲ್ಲಿ ಆಗಿನ ರಕ್ಷಣಾ ಸಚಿವ ಎ.ಕೆ. ಆಂಟನಿ ಕಾರ್ಗಿಲ್ ದಿವಸವನ್ನು 10 ವರ್ಷಗಳ ತುಂಬಿದ ನೆನಪಿನಲ್ಲಿ ಆಚರಣೆ ಮಾಡುತ್ತೇವೆ ,ಎಂದು ರಾಜೀವ್ ಚಂದ್ರ ಶೇಖರ್ ಅವರಿಗೆ ಪತ್ರ ಬರೆದಿದ್ದರು. ಅಂದಿನಿಂದ ಇದುವರೆಗೆ ಪ್ರತಿ ವರ್ಷ ಕಾರ್ಗಿಲ್ ವಿಜಯ್ ದಿವಸ ಆಚರಣೆ ಮಾಡಲಾಗುತ್ತದೆ.

Loading...
Click to comment

Leave a Reply

Your email address will not be published. Required fields are marked *

Most Popular

To Top