Uncategorised

ಮೋದಿ ಮತ್ತು ಅಮಿತ್ ಷಾ ಅವರನ್ನು ಹೊಗಳಿ , ರಕ್ಷಣೆಗೆ ಬರದ ಮುಸ್ಲಿಂ ರಾಜಕಾರಣಿಗಳನ್ನು ಪ್ರಶ್ನಿಸಿದ ನಟ ಅಜಾಜ್ ಖಾನ್

ನಿರಂತರವಾಗಿ ಹಿಂದೂಗಳನ್ನು ಮತ್ತು ಬಿಜೆಪಿ ನಾಯಕರನ್ನು ಕೆಟ್ಟ ಪದಗಳಿಂದ ನಿಂದಿಸುತ್ತಿದ್ದ ,ಬಾಲಿವುಡ್ ನಟ ಅಜಾಜ್ ಖಾನ್ ಜೈಲಿಗೆ ಹೋಗಿ ಬಂದ ನಂತರ ಈಗ ಬಿಜೆಪಿ ಪಕ್ಷ ವನ್ನು ಹೋಗಳುವುದಲ್ಲದೆ ,ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹಸಚಿವ ಅಮಿತ ಷಾ ರನ್ನು ಕೂಡ ಹೋಗಳಿದ್ದಾನೆ.

ಈ ಹಿಂದೆ ಅಧಿಕೃತ ಮತ್ತು ಅನಧಿಕೃತ ಮುಸ್ಲಿಂರು ಸೇರಿದಂತೆ 40 ಕೋಟಿ ಮುಸ್ಲಿಂರು ಬೀದಿಗಿಳಿದು ಹಿಂದೂ ಗಳಿಗೆ ನಮ್ಮ ಶಕ್ತಿ ತೋರಿಸ ಬೇಕು ಎಂದು ಹೇಳಿದ್ದ,ಇದರ ಬಳಿಕ ಮಂಬಯ ಪೊಲೀಸ್ ರು ಕೋಮುಗಲಭೆ ಸೃಷ್ಟಿ ಮಾಡಲು ಪ್ರಯತ್ನಿಸಿದ ಆರೋಪದ ಮೇಲೆ ಅಜಾಜ್ ಖಾನ್ ನ್ನು ಅರೆಸ್ಟ್ ಮಾಡಿದ್ದರು.4 ದಿನ ಜೈಲಿನಲ್ಲಿ ಕಳಿದು ನಂತರ ಸಲ್ಮಾನ್ ಖಾನ್ ಆಪ್ತರ ಸಹಾಯದಿಂದ ಅಜಾಜ್ ಖಾನ್ ಜಾಮೀನು ಪಡಿದು ಹೊರಬಂದಿದ್ದಾನೆ .

ಕುರ್ ಆನ್ ಮತ್ತು ಇಸ್ಲಾಂ ನನ್ನ ಮೊದಲ ಆಯ್ಕೆ ನಂತರ ಭಾರತ ಮತ್ತು ಭಾರತದ ಸಂವಿಧಾನ ಎಂದು 2016 ರಲ್ಲಿ ಅಜಮ್ ಖಾನ್ ಹೇಳಿ ವಿವಾದ ಸೃಷ್ಟಿ ಮಾಡಿದ್ದ, ಈಗ ಕೇವಲ ನಾಲ್ಕು ದಿನ ಜೈಲಿಗೆ ಹೋಗಿ ಬಂದ ನಂತರ ಅಜಾಜ್ ಖಾನ್ ನಲ್ಲಿ ಬಾರಿ ಬದಲಾವಣೆ ಕಂಡು ಬಂದಿದೆ. ಈಗ ಹೊಸ ವಿಡಿಯೋದಲ್ಲಿ ಬಿಜೆಪಿ ಮತ್ತು ಮೋದಿ ಅಮಿತ್ ಷಾ ರನ್ನು ಹೋಗಳಿದ್ದಾನೆ.

“ಕಾಂಗ್ರೆಸ್ಸ್ ಮುಸ್ಲಿಂ ರಿಗೆ ಅನ್ಯಾಯ ಮಾಡಿದೆ, ನಾವು ಬಿಜೆಪಿ ಯನ್ನು ಪ್ರಶ್ನೆ ಮಾಡ ಬಾರದು,ಈ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿ ಇರುವಾಗ ಸಾವಿರಾರು ಮುಸ್ಲಿಂ ರನ್ನು ಹತ್ಯೆ ಮಾಡಿದೆ ಮತ್ತು ಅರೆಸ್ಟ್ ಮಾಡಿದೆ. ಕಾಂಗ್ರೆಸ್ ಅರೆಸ್ಟ್ ಮಾಡಿದ ಆ ಎಲ್ಲ ಮುಸ್ಲಿಂರನ್ನು ಬಿಜೆಪಿ ಬಿಡುಗಡೆ ಮಾಡಿದೆ, ಬಿಜೆಪಿ ಅಧಿಕಾರದಲ್ಲಿ ಹತ್ಯೆಯಾದ ಮುಸ್ಲಿಂರ ಸಂಖ್ಯೆ ಬಹಳ ಕಡಿಮೆ.ಮುಸ್ಲಿಂ ರನ್ನು ಬಿಡುಗಡೆ ಮಾಡಿದ ಬಿಜೆಪಿ ಸರ್ಕಾರ ಕ್ಕೆ, ಪ್ರಧಾನ ಮಂತ್ರಿ ಮೋದಿ ಮತ್ತು ಅಮಿತ ಷಾ ಗೆ ನನ್ನ ಧನ್ಯವಾದಗಳು. ನನ್ನ ಸಹಾಯಕ್ಕೆ ಬಾರದ ಮುಸ್ಲಿಂ ನಾಯಕರು ನಾಲಾಯಕರು ಮತ್ತು ಅವರಿಂದ ಮುಸ್ಲಿಂರಿಗೆ ಯಾವುದೇ ಲಾಭವಿಲ್ಲ “ಎಂದು ಅಜಾಜ್ ಖಾನ್ ತನ್ನ ಹೊಸ ವಿಡಿಯೋದಲ್ಲಿ ಹೇಳಿದ್ದಾನೆ.

Loading...
Click to comment

Leave a Reply

Your email address will not be published. Required fields are marked *

Most Popular

To Top