ರಾಷ್ಟ್ರೀಯ ಸುದ್ದಿ

ಪಂಚ್ ಮೋದಿ ಚಾಲೆಂಜ್ ನಲ್ಲಿ ಪ್ರಧಾನಿ ಮೋದಿಯನ್ನು ಅವಮಾನ ಮಾಡಿದ್ದ ಕಮ್ಯುನಿಸ್ಟ್ ಕಾರ್ಯಕರ್ತನ ಬೆನ್ನು ಮೂಳೆ ಮುರಿದ ಕೇರಳ ಪೊಲೀಸರು.

2017ರಲ್ಲಿ ಪೆಟ್ರೋಲ್ ಬೆಲೆ ಏರಿಕೆಗೆ ಮೋದಿ ಮತ್ತು ಬಿಜೆಪಿ ಪಕ್ಷ ಕಾರಣ ಎಂದು ಕೇರಳದ ಹಲವು ಜಿಲ್ಲೆಗಳಲ್ಲಿ “ಪಂಚ್ ಮೋದಿ ಚಾಲೆಂಜ್” ಹೆಸರಿನಲ್ಲಿ ಕಮ್ಯುನಿಸ್ಟ್ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದರು .

ಪಂಚ್ ಮೋದಿ ಚಾಲೆಂಜ್ ನಲ್ಲಿ ಮೋದಿ ಭಾವ ಚಿತ್ರವನ್ನು ಬಾಕ್ಸಿಂಗ್ ಗ್ಲೋಸ್ ನಿಂದ ಬಡಿಯುವ ಅಥವಾ ಬೂಟುಗಾಲಿನಿಂದ ಒದೆಯುವ ಆಯ್ಕೆಯನ್ನು ನೀಡಲಾಗಿತ್ತು. ಪೆಟ್ರೋಲ್ ದರ ಏರಿಕೆ ಮಾಡಿದ ಬಡವರ ವಿರೋಧಿ ಮತ್ತು ಕಾರ್ಮಿಕ ವಿರೋಧಿ ಮೋದಿಗೆ ಧಿಕ್ಕಾರ ಎಂದು ಘೋಷಣೆ ಕೂಗುತ್ತಾ ಮೋದಿ ಚಿತ್ರವನ್ನು ಒದ್ದು ಕಮ್ಯುನಿಸ್ಟ್ ರು ಅವಮಾನ ಮಾಡಿದ್ದರು, ಅಷ್ಟೇ ಅಲ್ಲದೇ ಪಂಚ್ ಮೋದಿ ಚಾಲೆಂಜ್ ಮಾಡಲು ಸಾರ್ವಜನಿಕ ರಿಗೆ ಅವಕಾಶವನ್ನು ನೀಡಿದ್ದರು.ಈ ವಿವಾಧಿತ ಪ್ರತಿಭಟನೆ ಹಲವು ಕಡೆ ಹಿಂಸಾತ್ಮಕ ಘಟನೆಗೆ ಕಾರಣವಾಗಿತ್ತು.

ಆಸ್ಲಾಫ್ ಪರಕಾ ನ್ ಎಂಬ ಕಮ್ಯುನಿಸ್ಟ್ ಕಾರ್ಯಕರ್ತ ಮೋದಿ ಭಾವ ಚಿತ್ರವನ್ನು ಒದೆಯುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ವೈರಲ್ ಆಗಿತ್ತು. ಈ ಚಿತ್ರವನ್ನು ನೋಡಿ ಹಲವರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು.ಈಗ CPM ಕಾರ್ಯಕರ್ತರ ಪರವಾಗಿ ಪೊಲೀಸ್ ಠಾಣೆ ಎದುರಿಗೆ ಹಿಂಸಾತ್ಮಕ ಪ್ರತಿಭಟನೆ ಮಾಡಲು ಬಂದ ಆಸ್ಲಾಪ್ ಕುತ್ತಿಗೆ ಮತ್ತು ಬೆನ್ನು ಮೂಳೆ ಕೇರಳದ ಪೋಲಿಸರ್ ಲಾಠಿ ಏಟಿಗೆ ಮುರಿದಿದೆ.

Loading...
Click to comment

Leave a Reply

Your email address will not be published. Required fields are marked *

Most Popular

To Top