ರಾಷ್ಟ್ರೀಯ ಸುದ್ದಿ

ಮುಸ್ಲಿಂರು ಕೂಡ ಜೈ ಶ್ರೀ ರಾಮ ಹೇಳ ಬಹುದು- ಸಯ್ಯದ್ ಮಮೂನುಲ್

“ಇಸ್ಲಾಂನಲ್ಲಿ ಜೈ ಶ್ರೀ ರಾಮ ಹೇಳಲು ಯಾವುದೇ ನಿರ್ಬಂಧನೆಗಲಿಲ್ಲ, ಎಲ್ಲ ಮುಸ್ಲಿಂರು ಜೈ ಶ್ರೀ ರಾಮ ಹೇಳ ಬಹುದು” ಎಂದು ಅಸ್ಸಾಂ ಬಿಜೆಪಿ ವಕ್ತಾರ ಸಯ್ಯದ್ ಮಮೂನುಲ್ ಅವಲ್ ಹೇಳಿದ್ದಾರೆ.

“ಮುಸ್ಲಿಂರು ಜೈ ಜೀಸಸ್ ಕ್ರಿಸ್ತ ,ಜೈ ಮಹಾದೇವ ,ಜೈ ಕಾಳಿ ಇತ್ಯಾದಿಗಳನ್ನು ಹೇಳುವುದು ಇಸ್ಲಾಂ ವಿರುದ್ಧವಲ್ಲ,ಮಹಾಪುರುಷರ ಪರವಾಗಿ ಘೋಷಣೆ ಕೂಗುವುದು ಧರ್ಮ ವಿರೋಧವಲ್ಲ,ಶ್ರೀ ರಾಮ ಪ್ರಭು ಪ್ರಾಚೀನ ಭಾರತದ ಶ್ರೇಷ್ಠ ಆಡಳಿತಗಾರ ಮತ್ತು ಮಹಾಪುರುಷ ,ಇದೆ ಕಾರಣಕ್ಕೆ ಭಾರತೀಯ ಜನತಾ ಪಕ್ಷ ರಾಮ ರಾಜ್ಯದ ಬಗ್ಗೆ ಮಾತನಾಡುತ್ತದೆ “ಎಂದು ಸಯ್ಯದ್ ಮಮೂನುಲ್ ಹೇಳಿದ್ದಾರೆ.

“ಅಸ್ಸಾಂ ರಾಜ್ಯದಲ್ಲಿ ಕೆಲವು ವ್ಯಕ್ತಿಗಳು ಕೋಮು ಸೌಹಾರ್ದ ಹಾಳು ಮಾಡುತ್ತಿದ್ದಾರೆ.ಅವರಿಗೆ ಬಿಜೆಪಿ ಬಗ್ಗೆ ಗೊತ್ತಿಲ್ಲ, ಅವರು ಜೈ ಶ್ರೀ ರಾಮ ಘೋಷಣೆಗೆ ಧಾರ್ಮಿಕ ಬಣ್ಣ ಹಚ್ಚಲು ಪ್ರಯತ್ನ ಪಡುತ್ತಿದ್ದಾರೆ.ಮುಂದಿನ 2021ರಲ್ಲಿ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಅಸ್ಸಾಂ ನಲ್ಲಿ ಅಧಿಕಾರಕ್ಕೆ ಬರಲಿದೆ ” ಎಂದು ಸಯ್ಯದ್ ಮಮೂನುಲ್ ಇದೆ ಸಂದರ್ಭದಲ್ಲಿ ಹೇಳಿದ್ದಾರೆ .

Loading...
Click to comment

Leave a Reply

Your email address will not be published. Required fields are marked *

Most Popular

To Top