ರಾಜ್ಯ

ಮುಸ್ಲಿಂರ ಮೇಲಿನ ದ್ವೇಷದ ಕಾರಣ ಬಿಜೆಪಿ ಟಿಪ್ಪು ಜಯಂತಿ ರದ್ದುಗೊಳಿಸಿದೆ: ಸಿದ್ದರಾಮಯ್ಯ

ಕೋಮುವಾದಿ ಬಿಜೆಪಿ , ಅಲ್ಪಸಂಖ್ಯಾತ ಮುಸ್ಲಿಂರನ್ನು ದ್ವೇಷ ಮಾಡುತ್ತದೆ ,ಇದೆ ಕಾರಣಕ್ಕೆ ಟಿಪ್ಪು ಜಯಂತಿಯನ್ನು ರದ್ದು ಮಾಡಿದ್ದಾರೆ ಎಂದು ಬಾದಾಮಿ ಶಾಸಕ ಸಿದ್ದರಾಮಯ್ಯ ಹೇಳಿದ್ದಾರೆ.

“ಟಿಪ್ಪು ದಿನಾಚರಣೆ ರದ್ದು ಮಾಡಿರುವುದು ದೊಡ್ಡ ತಪ್ಪು. ಟಿಪ್ಪು ಕೇವಲ ಅಲ್ಪಸಂಖ್ಯಾತ ಮುಸ್ಲಿಂರಿಗೆ ಸೇರಿದ ರಾಜನಾಗಿರಲಿಲ್ಲ, ಬದಲಿಗೆ ಬ್ರಿಟಿಷರ ಜೊತೆಗೆ ಹೋರಾಡಿದ ಅಪ್ರತಿಮ ದೇಶಭಕ್ತನಾಗಿದ್ದ, ಕೆಆರ್‍ಎಸ್ ನಿರ್ಮಾಣಕ್ಕೆ ಯೋಜನೆ ಹಾಕಿದ್ದೆ ಟಿಪ್ಪು ಸುಲ್ತಾನ” ಎಂದು ಸಿದ್ದರಾಯ ಹೇಳಿದ್ದಾರೆ.

ಮೈಸೂರಿನಲ್ಲಿ ಹಲವು ಕೈಗಾರಿಕ, ಕೃಷಿ ಮತ್ತು ವಾಣಿಜ್ಯ ಕ್ರಾಂತಿಯನ್ನು ಟಿಪ್ಪು ಸುಲ್ತಾನ್ ಮಾಡಿದ್ದಾರೆ, ಇದೆ ಕಾರಣಕ್ಕೆ ನಾವು ಟಿಪ್ಪು ಜಯಂತಿ ಪ್ರಾರಂಭಿಸಿದೆವು . ಇದರ ಹೊರತಾಗಿ ಬೇರೆ ಉದ್ದೇಶವನ್ನು ನಾವು ಹೊಂದಿರಲಿಲ್ಲ ಎಂದು ತಿಳಿಸಿದರು ಎಂದು ಸಿದ್ದರಾಮಯ್ಯ ಇದೆ ಸಂದರ್ಭದಲ್ಲಿ ಹೇಳಿದ್ದಾರೆ.

ಟಿಪ್ಪು ಜಯಂತಿ ಇಸ್ಲಾಂ ವಿರುದ್ಧವಾಗಿದ್ದರು, ಬುದ್ಧಿ ಜೀವಿಗಳು ಮುಸ್ಲಿಂ ನಾಯಕ ಮತ್ತು ಮೌಲ್ವಿ ವಿಗಳನ್ನು ಒಪ್ಪುವಂತೆ ಮಾಡಿದ್ದರು, ಅಂದಿನ ಸಿದ್ದರಾಮಯ್ಯ ಸರ್ಕಾರ ಟಿಪ್ಪು ಜಯಂತಿ ಪ್ರಾರಂಭಿಸಿ ರಾಜ್ಯಕ್ಕೆ ಬೆಂಕಿ ಹಚ್ಚಿದ್ದರು.ಹಿಂದೂ ದೇವಾಲಯಗಳನ್ನು ಟಿಪ್ಪು ರಾಜಕೀಯ ಕಾರಣಕ್ಕೆ ದ್ವಂಸಗೊಳಿಸದ ಹೊರತು, ಧಾರ್ಮಿಕ ಕಾರಣ ಕ್ಕೆ ಅಲ್ಲ ಎಂಬುದನ್ನು ಬಿಂಬಿಸುವುದು ಸಿದ್ದರಾಮಯ್ಯ ಮತ್ತು ಬುದ್ಧಿ ಜೀವಿಗಳ ಮುಖ್ಯ ಉದ್ದೇಶವಾಗಿತ್ತು.

Loading...
Click to comment

Leave a Reply

Your email address will not be published. Required fields are marked *

Most Popular

To Top